ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Sunday 7 August 2011

ಬರುವಳೆನ್ನ ಶಾರದೆ ! / Baruvalenna Sharade

ರಚನೆ : ಕೆ. ಸ್. ನರಸಿಂಹ ಸ್ವಾಮಿ 

ಮದುವೆಯಾಗಿ ತಿಂಗಳಿಲ್ಲ 
ನೋಡಿರಣ್ಣ ಹೇಗಿದೆ !
ನಾನು ಕೂಗಿದಾಗಲೆಲ್ಲ 
ಬರುವಳೆನ್ನ ಶಾರದೆ !
ಹಿಂದೆ ಮುಂದೆ ನೋಡದೆ, 
ಎದುರು ಮಾತನಾಡದೆ.

ಕೋಣೆಯೊಳಗೆ ಬಳೆಯ ಸದ್ದು  !
ನಗುವರತ್ತೆ ಬಿದ್ದು, ಬಿದ್ದು !
ಸುಮ್ಮನಿರಲು ಮಾವನವರು,
"ಒಳಗೆ ಅಕ್ಕ, ಭಾವನವರು"
ಎಂದು ತುಂಟ ಹುಡುಗನು 
ಗುಟ್ಟ ಬಯಲಿಗೆಳೆವನು !

ಒಂದು ಹೆಣ್ಣಿಗೊಂದು ಗಂಡು 
ಹೇಗೋ ಸೇರಿ ಹೊಂದಿಕೊಂಡು,
ಕಾಣದೊಂದು ಕನಸ ಕಂಡು,
ಮಾತಿಗೊಲಿಯದಮೃತವುಂಡು,
ದುಃಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೇ ?

ಯಾರು ಕದ್ದು ನುಡಿದರೇನು ?
ಊರೆ ಎದ್ದು ಕುಣಿದರೇನು ?
ಜನರ ಬಾಯಿಗಿಲ್ಲ ಬೀಗ,
ಹೃದಯದೊಳಗೆ ಪ್ರೇಮ ರಾಗ 
ಇಂಥ ಕೂಗನಳಿಸಿದೆ, 
ಬೆಳಗಿ ಬದುಕ ಹರಸಿದೆ.

ಇಂದೇ ಅದಕೆ ಕರೆವುದು 
ನನ್ನ ಹುಡುಗಿ ಎನುವುದು 
ಹೂವ ಮುಡಿಸಿ ನಗುವುದು 
ಅಪ್ಪಿ ಮುತ್ತನಿಡುವುದು.-
ಬಾರೆ ನನ್ನ ಶಾರದೆ 
ಬಾರೆ ಅತ್ತ ನೋಡದೆ !

No comments:

Post a Comment